ಮಂಗಳವಾರ, ಫೆಬ್ರವರಿ 15, 2011

ರತ್ನಾಕರಶತಕ - ೮

ಬಿಸಿಲಿಂ ಕಂದದ ಬೆಂಕಿಯಿಂ ಸುಡದ ನೀರಿಂನಾಂದದುಗ್ರಾಸಿ ಭೇ
ದಿಸಲು ಬಾರದ ಚಿನ್ಮಯ ಮರೆದು ತನ್ನೊಳ್ಪಂ ಪರಧ್ಯಾನದಿಂ ||
ಪಸಿವಿಂದೀ ಬಹುಭಾದೆಯಿಂ ರುಜೆಗಳಿಂ ಕೇಡಾಗುವೀ ಮೇಯ್ಗೆ ಸಂ
ದಿಸಿದಂ ತನ್ನನೆ ಚಿಂತಿಸಲ್ಸುಕಿಯಲಾ ರತ್ನಾಕರಾಧೀಶ್ವರಾ ||೮||

ರತ್ನಾಕರಶತಕ - ೧೧

ಬೂರಂ ವಾರಿಯೊಳಳ್ದಿಯೂರ್ಧ್ವಗಮನಂಗೆಟ್ಟು ರ್ವಿಯೊಳ್ಬಿಳ್ದು ದೂ
ಳ್ಪಾರೈಸಲ್ಸುಳಿಗಾಳಿಯಿಂದುಳ್ವವೂಲ್ಕರ್ಮಂಗಳಿಂ ನಾಂದು ಮೆ ||
ಯ್ಬಾರದಾಳ್ದುರೆ ಕರ್ಮಮೊಯ್ದೆಡೆಗೆ ಸುತ್ತುತ್ತಿರ್ಪೆನಂತಲ್ಲದಾ
ನಾರೀ ಸಂಸ್ಕೃತಿಯಾರೂ ಮೋಕ್ಷಕನೆ ನಾಂ ರತ್ನಾಕರಾಧೀಶ್ವರಾ ||೧೧||